ಅಕ್ಕ ತಂಗಿ ಇಬ್ಬರು ನಟಿಯರು ಎಂಬುದನ್ನೇ ತಿಳಿಯದೇ ಮದುವೆ ಆದ್ರಾ ಗೌತಮ್.. ‌ಅಸಲಿಗೆ ಗೌತಮ್ ಯಾರ ಮಗ ಗೊತ್ತಾ?

Source Credit RJ News Kannada

ಮೊನ್ನೆ ಮೊನ್ನೆಯಷ್ಟೇ ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಅಕ್ಕ ಕಿರುತೆರೆ ನಟಿ ನಿತ್ಯಾ ರಾಮ್ ಅವರ ಕಲ್ಯಾಣ ಆಸ್ಟ್ರೇಲಿಯಾ ಉದ್ಯಮಿ ಗೌತಮ್ ರೊಂದಿಗೆ ನೆರವೇರಿದ್ದು.. ಸದ್ಯ ಕನ್ನಡ ಹಾಗೂ ತಮಿಳು ಕಿರುತೆರೆ ಲೋಕದಲ್ಲಿ ಮಿಂಚುತ್ತಿದ್ದ ನಿತ್ಯಾ ರಾಮ್ ತಮ್ಮ ಬಣ್ಣದ ಬದುಕಿಗೆ ಫುಲ್ ಸ್ಟಾಪ್ ಇಟ್ಟು ಗೌತಮ್ ಅವರ ಜೊತೆ ಆಸ್ಟ್ರೇಲಿಯಾದಲ್ಲಿಯೇ ನೆಲೆಸಲಿದ್ದಾರೆ.

ಆದರೆ ಅಸಲಿಗೆ ಈ ಗೌತಮ್ ಯಾರು..‌ ನಿತ್ಯಾ ರಾಮ್ ಅವರದ್ದು ಲವ್ ಮ್ಯಾರೇಜ್ ಆ? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.. ಗೌತಮ್ ಮೂಲತಃ ಕನ್ನಡಿಗ ಆದರೆ 10 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿಯೇ ನೆಲೆಸಿದ್ದಾರೆ.

ಗೌತಮ್ ಹಾಗೂ ನಿತ್ಯಾ ರಾಮ್ ಅವರದ್ದು ಲವ್ ಮ್ಯಾರೇಜ್ ಅಲ್ಲ.. ಮನೆಯವರು ನೋಡಿ ಒಪ್ಪಿ ನಿರ್ಧಾರ ಮಾಡಿರುವ ಅರೇಂಜ್ ಮ್ಯಾರೇಜ್..‌ ಇನ್ನೂ ಹೇಳಬೇಕೆಂದರೆ ಗೌತಮ್ ಅವರಿಗೆ ನಿತ್ಯಾ ಹಾಗೂ ರಚಿತಾರಾಮ್ ನಟಿಯರು ಎಂಬ ವಿಚಾರವೇ ತಿಳಿದಿರಲಿಲ್ಲ.. ಅಪ್ಪ ಅಮ್ಮ ಹುಡುಗಿ ನೋಡಿದ ಬಳಿಕ ನಿತ್ಯಾ ರಾಮ್ ಅವರ ಧಾರಾವಾಹಿಯ ಕ್ಲಿಪಿಂಗ್ ನೋಡಿ ಮೆಚ್ಚಿಕೊಂಡಿದ್ದರಂತೆ.. ಮದುವೆಯ ನಂತರ ಕೂಡ ನಟಿಸುವ ಇಚ್ಛೆ ಇದ್ದರೆ ಮುಂದುವರೆಯಿರಿ ಎಂದಿದ್ದರಂತೆ ಗೌತಮ್..

ಆದರೆ ಈ ಗೌತಮ್ ಯಾರ ಮಗ? ಇವರ ಪರಿಚಯ ನಿತ್ಯಾ ರಾಮ್ ಅವರಿಗೆ ಹೇಗಾಯಿತು ಅನ್ನೋದಾದರೆ ನಿತ್ಯಾರಾಮ್ ತಾಯಿ ಹಾಗೂ ಗೌತಮ್ ಅವರ ತಾಯಿ ತುಂಬಾ ಒಳ್ಳೆಯ ಸ್ನೇಹಿತರು..

ಇವರಿಬ್ಬರ ಮನೆಯಲ್ಲಿಯೂ ಮದುವೆ ವಿಚಾರವಾಗಿ ಹುಡುಗ ಹುಡುಗಿಯನ್ನು‌ ನೋಡಲಾಗುತಿತ್ತು.. ಆ ಸಮಯದಲ್ಲಿ ಇಬ್ಬರು ಮಾತನಾಡಿಕೊಂಡು ಮೊದಲು ಮಕ್ಕಳ ಅಭಿಪ್ರಾಯವನ್ನು ಕೇಳಿ ನಂತರ ಮುಂದುವರೆದು ಇದೀಗ ಸಂಪ್ರದಾಯದಂತೆ ಬೆಂಗಳೂರಿನಲ್ಲಿಯೇ ಮದುವೆ ನೆರವೇರಿದೆ.

ಸದ್ಯ ನಿತ್ಯಾ ರಾಮ್ ಅವರು ತಮ್ಮ ನಟನಾ ವೃತ್ತಿಯನ್ನು ನಿಲ್ಲಿಸುವ ನಿರ್ಧಾರ ಮಾಡಿದ್ದು ಈಗಾಗಲೇ ಅವರು ಅಭಿನಯಿಸುತ್ತಿದ್ದ ಧಾರಾವಾಹಿಗಳ ಪಾತ್ರಕ್ಕೆ ಹೊಸ ಕಲಾವಿದರ ಆಗಮನವಾಗಿದೆ.

ಇನ್ನು ಮದುವೆಗೂ ಮುನ್ನ ಅಕ್ಕನ ಮದುವೆ ಬಗ್ಗೆ ಮಾತನಾಡಿದ್ದ ರಚಿತಾ ರಾಮ್ ಅವರು ಗೌತಮ್ ತುಂಬಾ ಒಳ್ಳೆಯ ಹುಡುಗ.. ಅಕ್ಕನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.. ಅದಕ್ಕಾಗಿ ಮನೆಯವರು ಮದುವೆ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.. ಅಷ್ಟೇ ಅಲ್ಲದೆ ಮದುವೆಯ ದಿನ ಬಾವನೊಂದಿಗೆ ರಚಿತಾ ರಾಮ್ ಅವರ ಸ್ಪೆಷಲ್ ಕ್ರೇಜಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಫೋಟೋಗಳು ವೈರಲ್ ಆಗಿದ್ದವು‌.

Source Credit RJ News Kannada

Niranthara News

Leave a Reply

Your email address will not be published. Required fields are marked *

Next Post

ಮೊದಲೆರೆಡು ದಿನ ಇವರಿಬ್ಬರ ಭೇಟಿ.. ಮೂರನೇ ದಿನ ನಡೆದದ್ದೇ ಬೇರೆ.. ನಿಜಕ್ಕೂ ಹ್ಯಾಟ್ಸ್ ಆಫ್ ಮೇಡಂ ನಿಮಗೆ..

Tue Dec 10 , 2019
Source Credit RJ News Kannada ಶಕ್ತಿ ಎಂಬುವವರು ರಾಜಸ್ಥಾನ ಮೂಲದವರು ಮೈಸೂರಿನಲ್ಲಿ ನಿರ್ಗತಿಕರಾಗಿ ವಾಸ ಮಾಡುತ್ತಿದ್ದರು. ರಿಂಗ್ ರೋಡ್ ಆಸುಪಾಸಿನಲ್ಲಿ ರಸ್ತೆಯ ಪಕ್ಕ ಮಲಗಿ ಜೀವನ ಕಳೆಯುತ್ತಿದ್ದರು. ಈಗಾಗಲೇ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವತ್ಸಲಾ ಅವರು ಇದನ್ನು ನೋಡಿ, ಇವರಿಗೊಂದು ಮರುಜೀವನ ಕೊಡಬೇಕೆಂದು ನಿರ್ಧರಿಸಿದರು. (ಈ ವರೆಗೆ ಅನೇಕ ಸೂರಿಲ್ಲದ ವ್ಯಕ್ತಿಗಳಿಗೆ ಸೂರು ಕಲ್ಪಿಸುವ ಶ್ರೇಷ್ಠ ಕಾರ್ಯವನ್ನು ನಿರ್ವಹಿಸಿದ್ದಾರೆ) Pin it Email https://nirantharanews.com/%e0%b2%85%e0%b2%95%e0%b3%8d%e0%b2%95-%e0%b2%a4%e0%b2%82%e0%b2%97%e0%b2%bf-%e0%b2%87%e0%b2%ac%e0%b3%8d%e0%b2%ac%e0%b2%b0%e0%b3%81-%e0%b2%a8%e0%b2%9f%e0%b2%bf%e0%b2%af%e0%b2%b0%e0%b3%81-%e0%b2%8e/#UGhvdG9HcmlkXzE ಒಂದು ದಿನ ಬೆಳಿಗ್ಗೆ ಹೋಗಿ ಶಕ್ತಿ ಅವರನ್ನು ಮಾತಾಡಿಸಿ ಅನಾಥಾಶ್ರಮಕ್ಕೆ ಸೇರಿಸುವುದರ ಕುರಿತಾಗಿ ವತ್ಸಲಾ ಹೇಳಿದಾಗ, […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links